ಅಂದು ಪಂಚಾಯತಿನಲ್ಲಿ ಶೌಚಾಲಯಕ್ಕೆ ಸಂಬಂಧಿಸಿದ್ದ ಒಂದು ಸಭೆ ನಡೆಯುತ್ತಿತ್ತು. ಆಗ ಹಠತ್ತಾಗಿ ಕೊರಗರ ಹುಡುಗನೊಬ್ಬ ಒಳ ಬಂದು - 'ನಮಗೆ ಮಳೆಗಾಲದ ಒಳಗೆ ಮನೆ ಕಟ್ಟಿಸಿ ಕೊಡುತ್ತಿರೋ, ಇಲ್ಲವೋ? ಇಲ್ಲವಾದರೆ ಪಂಚಾಯಿತಿಯ ಅಂಗಳದಲ್ಲೇ ಬಿಡಾರ ಹೂಡುತ್ತೇವೆ..' ಎಂದನಾತ. ಎಲ್ಲರೂ ಒಮ್ಮೆಲೇ ಅವಕ್ಕಾದರು! ಕೊರಗರು ಹೆಚ್ಚಾಗಿ ಕಾಡಿನಲ್ಲೇ ಇದ್ದವರು, ಎಲ್ಲರಿಗೂ ತಗ್ಗಿ ಬಗ್ಗಿ ನಡೆಯುವುದು ಅವರ ಅಭ್ಯಾಸ. ಹೀಗಿರುವಾಗ ಒಬ್ಬ ಕೊರಗರ ಹುಡುಗ ಧೈರ್ಯವಾಗಿ ತನ್ನ ಹಕ್ಕನ್ನು ಕೇಳುವುದು, ಪ್ರತಿಭಟಿನೆಗೆ ಮನಸ್ಸಾದರೂ ಮಾಡುವುದು, ಅದಕ್ಕಾಗಿ ಗ್ರಾಮ ಪಂಚಾಯತಿಯನ್ನೇ ಆರಿಸಿಕೊಳ್ಳುವುದು, ವಿಕೇಂದ್ರಿಕರಣದ ಶಕ್ತಿಯಲ್ಲದೆ ಇನ್ನೇನು?!(ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತಿನಲ್ಲಿ ನಡೆದ ಘಟನೆ)
- ನಿಖಿಲ್ ಕೋಲ್ಪೆ (ಪತ್ರಕರ್ತರು),
ಜನಜಾಗೃತಿ ಸಮಿತಿ ನರಿಕೊಂಬು
0 comments:
Post a Comment